ಲೂನ ೯ ಅಥವಾ ಲೂನಿಕ್ ೯ ಸೋವಿಯೆಟ್ ಒಕ್ಕೂಟದ ಲೂನ ಕಾರ್ಯಕ್ರಮದ ಒಂದು ಮಾನವರಹಿತ ಗಗನನೌಕೆ. ೧೯೬೬ರ ಜನವರಿ ೩೧ರಂದು ಉಡಾವಣೆಗೊಂಡ ಈ ನೌಕೆಯು ಫೆಬ್ರುವರಿ ೩ರಂದು ಚಂದ್ರನ ಮೇಲೆ ನಿಯಂತ್ರಿತವಾಗಿ ಇಳಿದು ಅಲ್ಲಿಂದ ಛಾಯಾಚಿತ್ರಗಳನ್ನು ಕಳುಹಿಸಿದ ಮೊದಲ ಗಗನನೌಕೆಯಾಯಿತು.ಇದು ೧೫೮೦ ಕೆಜಿ ತೂಕವಿತ್ತು. ಇದು ಸೊವಿಯಟ್‍ನ ೧೨ನೇ ಪ್ರಯತ್ನ.